ವಸಂತ ಋತು ಕಾಲಿಡುತ್ತಿದ್ದಂತೆಯೇ ಪ್ರಕ್ರತಿ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತದೆ. ಅರಣ್ಯ ಪ್ರದೇಶದಲ್ಲಿ ರಂಗುರಂಗಿನ ಹೂಗಳು ಅರಳಿ ನಿಂತು ಭೂಮಾತೆಯ ಮುಡಿಯನ್ನು ಸಿಂಗರಿಸುತ್ತವೆ. ಆಗ ಹೂಗಳ ಮಕರಂದವನ್ನು ಹೀರಿ ಅದನ್ನು ಜೇನಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗುವ ಜೇನ್ನೋಣಗಳು ಎತ್ತರದ ಸ್ಥಳದಲ್ಲಿ ಗೂಡು ಕಟ್ಟುತ್ತವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಹರಿಯುವ ಬೇಡ್ತಿ ನದಿಯ ದಂಡೆಯ ಮೇಲಿರುವ ವ್ರಕ್ಷಗಳಲ್ಲಿ ಪ್ರತಿವರ್ಷ ಜೇನ್ನೋಣಗಳು ಅಸಂಖ್ಯ ಸಂಖ್ಯೆಯಲ್ಲಿ ಗೂಡುಗಳನ್ನು ಕಟ್ಟಿ ಜೇನು ಜಾತ್ರೆ ನಡೆಸುವಂತೆ ಭಾಸವಾಗುತ್ತದೆ. ನೀಲಾಕಾಶದಲ್ಲಿ ಮಧುಪಾತ್ರೆಗಳು ಗಾಳಿಗೆ ತೂಗುತ್ತಿರುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ......
No comments:
Post a Comment